ನಮ್ಮ ಬಗ್ಗೆ

ದಿವಂಗತ ಎಸ್. ಶೇಖರ್ ನಾಯಕ್ ರವರ ಸವಿನೆನಪಿನೊಂದಿಗೆ.  

>> ನಮ್ಮ ಶಾಲೆ ಮುಖ್ಯಸ್ಥರ ನುಡಿ <<


ದಿವಂಗತ .ಎಸ್.ಶೇಖರ್ ನಾಯಕ್  
ಮಾಜಿ ಮುಖ್ಯ ಶಿಕ್ಷಕರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬೆಂಗಳೂರು ದಕ್ಷಿಣ ವಲಯ ೪
ಕೆ.ಆರ್. ಪುರಂ 
ಬೆಂಗಳೂರು ೬೭ 


"ಪ್ರಾಥಮಿಕ ಶಾಲಾ ಶಿಕ್ಷಕರಿಂದ, ಶಿಕ್ಷಕರಿಗಾಗಿ, ಶಿಕ್ಷಕರಿಗೋಸ್ಕರ ಇರುವ ಮಾಹಿತಿ ಕಣಜ"

ಆತ್ಮೀಯ ವೃತ್ತಿ ಭಾಂಧವರಾದ ಶಿಕ್ಷಕ ಮಿತ್ರರೇ, ಈ ಕಣಜವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಹಿತ ದೃಷ್ಟಿಯಿಂದ ಉತ್ತಮ ಉಪಯುಕ್ತ ಮಾಹಿತಿಗಳನ್ನು ನೀಡುವ ಸಲುವಾಗಿ ಹಾಗೂ ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿ ಸಹಕರಿಸುವ ಹಿತದೃಷ್ಟಿಯಿಂದ, ಶಿಕ್ಷಕ ಮಿತ್ರರಿಗೆ ಸಹಕಾರಿಯಾಗುವ ಮಾಹಿತಿಗಳನ್ನು ೨೦೧೬-೧೭  ಸಾಲಿನ ಶೈಕ್ಷಣಿಕ ವರ್ಷದಿಂದ ಕೊಡಲು ಆರಂಭಿಸಲಾಗಿದೆ. ಸಾಮಾನ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬೇಕಾಗುವ ಉಪಯುಕ್ತ ನಮೂನೆಗಳು, ಮಾದರಿ ಪಾಠಯೋಜನೆಗಳು, ಮಾದರಿ ಶಾಲಾ ಶೈಕ್ಷಣಿಕ ಯೋಜನೆ (SAP), ಮಾದರಿ ಶಾಲಾ ಅಭಿವೃದ್ಧಿ ಯೋಜನೆ (SDP), ಮಾದರಿ  ವಾರ್ಷಿಕ ಕ್ರಿಯಾ ಯೋಜನೆ, ನಲಿ-ಕಲಿ ಮಾಹಿತಿ, ಸಿ.ಸಿ.ಇ  ಮಾಹಿತಿ, ಮಾದರಿ ಶಾಲಾ ಪಂಚಾಂಗ, ಕಾಲಕಾಲಕ್ಕೆ ಬದಲಾಗುವ ಇಲಾಖೆಯ ಆದೇಶಗಳು ಮತ್ತು ಸುತ್ತೋಲೆಗಳು, ವಿಷಯವಾರು ಸಂಪನ್ಮೂಲ, ಬೋಧನಾ ತಂತ್ರಗಳು - ಸಾಧನಗಳು ಇತ್ಯಾದಿ ಶಾಲೆಗೆ ಬೇಕಾಗಿರುವ ಅಗತ್ಯ ನಮೂನೆಗಳನ್ನು ಕೇವಲ ಮಾದರಿಯಾಗಿ ನೀಡುವ ಹಾಗೂ ಶಿಕ್ಷಕ ಮಿತ್ರರೊಂದಿಗೆ ಹಂಚಿಕೊಳ್ಳುವ ಇದೊಂದು ಪುಟ್ಟ ಪ್ರಯತ್ನವಷ್ಟೆ. 

ಈ ಕಣಜದಲ್ಲಿ ಅನೇಕ ಕಾಣದ ಶಿಕ್ಷಕ ಮಿತ್ರರ ಕೈಗಳು "ಎಲೆಮರೆಯ ಕಾಯಿಯಂತೆ" ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆಂದು ತಿಳಿಸಲು ಹರ್ಷಿಸುತ್ತೇನೆ. 

ಇಂತಿ ನಿಮ್ಮ ಶಿಕ್ಷಕ ಮಿತ್ರ 
-----------------------------------------------------------------

ಪರಿಕಲ್ಪನೆ ಮತ್ತು ತಾಂತ್ರಿಕ ನಿರ್ವಹಣೆ :


ಶ್ರೀ. ರವಿಶಂಕರ್.ವಿ 
ಸಹ ಶಿಕ್ಷಕರು (GPT-ಕನ್ನಡ)
ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಕೆ.ಎಡತೊರೆ (ಡೈಸ್   29260303201)
ಹೆಚ್.ಡಿ.ಕೋಟೆ ತಾ|| 
ಮೈಸೂರು 
ಮೊ. ನಂ. 9663636677


-------------------------------------------------------------

ಶಿಕ್ಷಕ ಮಿತ್ರರೇ, 
ತಮ್ಮ ಬಳಿ ಉಪಯುಕ್ತ ಮಾಹಿತಿಗಳು ಇದ್ದಲ್ಲಿ ಈ ಬ್ಲಾಗ್ ನಲ್ಲಿ ಅಪ್ಲೋಡ್ ಮಾಡಿ ಸಹಕರಿಸಿ ಅಥವಾ ಈ ಕೆಳಗಿನ ಈ-ಮೇಲ್ ಗೆ ಕಳುಹಿಸಿಕೊಡಿ. ನಿಮ್ಮಿಂದ ಬಂದ ಉಪಯುಕ್ತ ಮಾಹಿತಿಗಳನ್ನು ರಜಾ ದಿನಗಳಲ್ಲಿ ಮಾತ್ರ ಈ ಕಣಜಕ್ಕೆ ಸೇರಿಸಲಾಗುವುದು. 

Email-ID - nammaashale@gmail.com 

Comments

  1. TAMMA EE PRAYATNAKKE SHATA SHATA PRANAMAGALU.

    ReplyDelete
  2. ನಿಮ್ಮ ಪ್ರಯತ್ನ ಚೆನ್ನಾಗಿದೆ ಅಭಿನಂದನೆಗಳು ಶಿಕ್ಷಕರಿಗೆ ಇದರಿಂದ ಉಪಯೋಗವಾಗುವ ಕೆಲಸಗಳು ಹೆಚ್ಚು ಆಗಲಿ
    ಮಹೇಶ.ಎಂ.ಕೆ
    ಶಿಕ್ಷಕ, ಮಾಕನಹುಂಡಿ ಶಾಲೆ,
    ಮೈಸೂರು ತಾಲ್ಲೋಕು.












    ReplyDelete
  3. I need technical supporter contact details..... Plz sir reply me

    ReplyDelete
  4. Super Work Sir All the best

    Shrikant Nandi
    Mudhol

    ReplyDelete
  5. i am trying to change the mobile number mapped to school but not getting link to do so! can someone tell me how to do this? Thanks

    ReplyDelete
  6. Is it possible to check mid day meal details of school and how to check

    ReplyDelete
  7. ಬಹಳ ಉತ್ತಮವಾಗಿದೆ‌. ‌‌‌‌ತಮ್ಮ ಸೇವೆ ಅನವರತ ಮುಂದುವರೆಯಲಿ.
    ಶುಭಾಶಯಗಳು.

    ReplyDelete
  8. Ethhichina Nali Kali TLM yava yava chatuvatikege enenu beku emba mahithi kaluhisi

    ReplyDelete
  9. ಗುರುಗಳೇ,
    ಈ application (app) link send ಮಾಡಿ.

    ReplyDelete
  10. ಗುರುಗಳೇ,
    ನಮ್ಮ ಶಾಲೆ application (app) link ತಿಳಿಸಿ.

    ReplyDelete
  11. Sir 2017 18 ರ income tax form 16 filling Mobile supported link post maadi

    ReplyDelete
  12. ಸರ್ ನಮಸ್ಕಾರ. ಉತ್ತಮ ಹಾಗೂ ಮಾರ್ಗದರ್ಶಿ ಮಾಹಿತಿಗಳು ನಿಮ್ಮ ಈ ಬ್ಲಾಗ್ ನಲ್ಲಿವೆ.ಅಭಿನಂದನೆಗಳು ತಮಗೆ.ಹೊಸ ವರ್ಷದ ಶುಭಾಶಯಗಳು.

    ReplyDelete

Post a Comment

We reply u shortly .. pls wait

Popular posts from this blog

ಸೇತುಬಂಧ ಸಾಹಿತ್ಯ 2024-25

ವಿದ್ಯಾಗಮ ತರಗತಿವಾರು ಅಕ್ಟೋಬರ್ ೨೦೨೦ ಮಾಹೆಯ ಪಠ್ಯ ಕಾರ್ಯಸೂಚಿಗಳು.