Bridge Course Formats 2024-25
ಸೇತುಬಂಧ ಕ್ರಿಯಾಯೋಜನೆಯ ಹಂತಗಳು
- ಪ್ರಸ್ತಕ ಸಾಲಿನ ತರಗತಿಗೆ ಹಿಂದಿನ ಸಾಲಿನ ತರಗತಿಯ ಬುನಾದಿ ಸಾಮರ್ಥ್ಯಗಳನ್ನು ಪಟ್ಟಿಮಾಡಿಕೊಳ್ಳುವುದು.
- FLN ಕಲಿಕಾಂಶಗಳನ್ನು ಪಟ್ಟಿಮಾಡಿಕೊಳ್ಳುವುದು.
- ಬುನಾದಿ ಸಾಮರ್ಥ್ಯಗಳನ್ನು ಆಧರಿಸಿ ಅದಕ್ಕೆ ಪೂರಕವಾಗಿ ಪೂರ್ವಪರೀಕ್ಷೆ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ತಯಾರಿಸಿಕೊಳ್ಳುವುದು.
- ಪೂರ್ವಪರೀಕ್ಷೆಯ ಉತ್ತರಪತ್ರಿಕೆಗಳನ್ನು ಮೌಲ್ಯಾಂಕನ ನಡೆಸಿ. ಸರಿ ಉತ್ತರ ಇರುವ ಪ್ರಶ್ನೆಗಳಿಗೆ A ಎಂದು, ತಪ್ಪು ಉತ್ತರ ಬರೆದಿರುವ ಪ್ರಶ್ನೆಗಳಿಗೆ B ಎಂದು ನೀಡುವುದು.
- ನಂತರ ಉತ್ತರ ಪತ್ರಿಕೆ ವಿಶ್ಲೇಷಣಾ ನಮೂನೆಯಲ್ಲಿ ಪ್ರಶ್ನೆವಾರು A ಮತ್ತು B ನಮೂದಿಸುವುದು.
- ನಂತರ ಬುನಾದಿ ಸಾಮರ್ಥ್ಯವಾರು ಕ್ರಿಯಾ ಚಟುವಟಿಕೆಗಳನ್ನು ರೂಪಿಸಿಕೊಳ್ಳುವುದು ಮತ್ತು ಸಾಮರ್ಥ್ಯವನ್ನು ಗಳಿಸಲು ಅಗತ್ಯ ಕಲಿಕಾ ಅಭ್ಯಾಸ ಮಾಡಿಸುವುದು.
- ಸಾಫಲ್ಯ ಪರೀಕ್ಷೆ ಪ್ರಶ್ನೆಪತ್ರಿಕೆ ಹಾಗೂ ಮಾದರಿ ಉತ್ತರ ಪತ್ರಿಕೆ ರಚಿಸಿಕೊಂಡು ಪರೀಕ್ಷೆ ನಡೆಸುವುದು.
- ಸಾಫಲ್ಯ ಪರೀಕ್ಷೆಯ ಉತ್ತರಪತ್ರಿಕೆಗಳನ್ನು ಮೌಲ್ಯಾಂಕನ ನಡೆಸಿ. ಸರಿ ಉತ್ತರ ಇರುವ ಪ್ರಶ್ನೆಗಳಿಗೆ A ಎಂದು, ತಪ್ಪು ಉತ್ತರ ಬರೆದಿರುವ ಪ್ರಶ್ನೆಗಳಿಗೆ B ಎಂದು ನೀಡುವುದು.
- ನಂತರ ಬುನಾದಿ ಸಾಮರ್ಥ್ಯಗಳನ್ನು ಗಳಿಸಿದ ವಿದ್ಯಾರ್ಥಿಗಳ ಪಟ್ಟಿಮಾಡಿಕೊಂಡು ವಿಶೇಷ ಚಟುವಟಿಕೆಗಳನ್ನು ಕೈಗೊಂಡು ಸಾಮರ್ಥ್ಯ ಗಳಿಸಲು ಪ್ರಯತ್ನಿಸುವುದು.
--------------
Comments
Post a Comment
We reply u shortly .. pls wait